Poorvottar Rashtriya Natya Samaroh - 2022 ಪೂರ್ವೋತ್ತರ್ ರಾಷ್ಟ್ರೀಯ ನಾಟ್ಯ ಸಮಾರೋಹ್ 2022 ಬೆಂಗಳೂರು
12.07.2022 - 16.07.2022

National School of Drama is organizing one of its important function "North East National Natya Festival-2022" which will be held in Bikaner (Rajasthan) from 14th to 18th May and Vadodara (Gujarat) from 16th to 20th May 2022 after the successful completion, from 12th to 16th July 2022 in Bangalore (Karnataka) to be held.
'Natya Samaroh' in which dramas from the northeastern states are organized in other states of the nation so that the spectators, and artists from other states can connect with the culture of other states and also get to know them.
Drama is a powerful medium of art that, being alive, reaches the audience directly. In which a direct relationship is formed between the audience and the actors. The life, time, place, and culture shown in the play can be easily understood. To commemorate the 75th Anniversary of Independence, the whole country is celebrating 'Azadi Ka Amrit Mahotsav', coming out of the difficult phase of Corona, and the National School of Drama is organizing this ceremony this year, this "Azadi Ka Amrit Mahotsav" runs throughout the year. Proud to be a part of.
This event is being organized by National School of Drama in Bangalore from 12th to 16th July, 2022. The event is being implemented in association with the Karnataka Nataka Akademi and the National School of Drama, Bangalore Center. The function will be inaugurated on 12th July at 7 pm at Suvrana Samskrithika Samucchaya Bhavana, Kalagram, Mallatahli, Bangalore. The function will be inaugurated by the chief guest Mr. Chandrashekar Kambar. Guest of honore at the function Smt. B. Jayashree, special guests Sh. Bheemasen R, Sh. Srinivas G Kappanna.
The function will be presided over by the Director, National School of Drama Prof. (Dr.) Ramesh Chandra Gaur. After the opening ceremony, the play "Bhoomikanya" directed by Manimala Das will be staged in the Assamese language.

The play "Blood Spot 2.0" directed by Oasis Sougaijam will be staged in Manipuri language on 13th July at 7 pm.

On July 14, the play "Rupaleem" by Simanta Phukan will be staged in the Assamese language.

On July 15, the drama "The Champion", directed by Uto Chishi, will be composed in the Naga language.

The play "Hey Chetlo (Go Away)" directed by Loitongbam Paringanba on July 16 will be staged in Manipuri language.

All these plays can be watched free of cost by the Bangalore audience.

 ಬ್ಲಡ್-ಸ್ಪಾಟ್ 2.0

ನಾಟಕದ ಕುರಿತು

ಬ್ಲಡ್-ಸ್ಪಾಟ್ 2.0 ನಾಟಕ ಕೋಳಿ ಕಾದಾಟದ ಸುತ್ತ ಹೆಣೆಯಲಾದ ಕಥೆ. ನಾಟಕವು ಲಿಂಗ, ಪುರುಷತ್ವ ಮತ್ತು ಅಧಿಕಾರದ ವಿಷಯದ ಮೇಲೆ ನೆಲೆಸಿದೆ. ಅಧಿಕಾರ ಮತ್ತು ಹಿಂಸೆಗಾಗಿ ಇರುವ ಮಾನವನ ಅತಿಯಾಸೆಯನ್ನು ಸಹ ಬಿಂಬಿಸುತ್ತದೆ. ಕಥೆಯು ಕೋಳಿ ಕಾದಾಟದ ಕುರಿತು ಆಗಿದ್ದರೂ ಸಹ, ಇದು ಮಾನವ ಸಮಾಜದ ಕುರಿತು ಮತ್ತು ಮಾನವನ ನಡವಳಿಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ನಾಟಕದ ಮುಖ್ಯ ಉದ್ದೇಶವೇನೆಂದರೆ, ಅಧಿಕಾರ ಇಲ್ಲದಿರುವವರು ಮತ್ತು ಅಂಚಿನಲ್ಲಿರುವವರಿಗೆ  ಸಮಾಜದಲ್ಲಿ ಇಂದು ಯಾವುದೇ ಸ್ಥಾನ, ಘನತೆ ದೊರಕುತ್ತಿಲ್ಲ ಎಂಬುದನ್ನು ಎತ್ತಿ ತೋರಿಸುತ್ತದೆ.

 

ನಿರ್ದೇಶಕ ಮತ್ತು ನಾಟಕಕಾರ

ಓಯಸಿಸ್ ಸೌಗೈಜಾಮ್ ಅವರು ಇಂಫಾಲ್‌ನ ಮಣಿಪುರ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಸಾಹಿತ್ಯ ಪದವೀಧರರು. ಅವರು ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ರಂಗವಿನ್ಯಾಸದ ಪರಿಣಿತಿ ಪೂರೈಸುವುದರ ಜೊತೆಗೆ ಮಣಿಪುರದ ಜಾನಪದ ಮತ್ತು ಸಾಂಪ್ರದಾಯಿಕ ಕ್ಷೇತ್ರಗಳಲ್ಲಿ ತರಬೇತಿ ಪಡೆದಿದ್ದಾರೆ, ಮಣಿಪುರಿಯ ಮಾರ್ಷಲ್ ಆರ್ಟ್ಸ್ ನಿಂದ ಐದು ವರ್ಷಗಳ ತರಬೇತಿ ಪಡೆದಿದ್ದಾರೆ. ಓಯಸಿಸ್ ಪಂಥೋಯಿಬಿ ನಾಟ್ಯ ಮಂದಿರ ಮತ್ತು ಕಂಗ್ಲೇ ಮೈಮ್ ಥಿಯೇಟರ್ ರೆಪರ್ಟರಿ, ಇಂಫಾಲ್ ನೊಂದಿಗು ಸಹ ಕಾರ್ಯನಿರ್ವಹಿಸಿದ್ದಾರೆ. ಅವರ ನಾಟಕ ಬಾಸ್ಕೆಟ್ ಆಫ್ ಡಾಲ್ಸ್ ಅನ್ನು 2015 (BRM) ರಲ್ಲಿ ಭಾರತದ ಅಂತರರಾಷ್ಟ್ರೀಯ ನಾಟಕೋತ್ಸವದಲ್ಲಿ ಪ್ರದರ್ಶಿಸಲಾಯಿತು. ದಿ ಅನ್‌ಚೈನ್, ಥೀಫ್, ಈಟಾ ತೌಮೈ, ಬ್ಲೈಂಡ್‌ನೆಸ್, ಬ್ಲಡ್, ಬಾಸ್ಕೆಟ್ ಆಫ್‌ ಡಾಲ್ಸ್‌, ಸಲೀಬ್, ಬ್ಲಡ್‌ಸ್ಪಾಟ್ ಮತ್ತು ಹೊಜಾಂಗ್ ಟ್ಯಾರೆಟ್ – ಇವು ಅವರ ನಿರ್ದೇಶನದಲ್ಲಿ ನಿರ್ಮಿಸಲಾದ ನಾಟಕಗಳು

ತಂಡ

1972 ರಲ್ಲಿ ಸ್ಥಾಪನೆಯಾದ ದಿ ಅಂಬಿಲಿಕಲ್‌ ರಂಗ ತಂಡವು ಸಮಾಜದ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ. ಇದು ವಿವಿಧ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಉತ್ಸವಗಳಲ್ಲಿ ಭಾಗವಹಿಸುತ್ತಿದೆ ಮತ್ತು ಪ್ರಶಸ್ತಿಗಳ ಸರಣಿಯನ್ನು ಹೊಂದಿದೆ. ಪ್ರಸ್ತುತ ಇದು ಆಧುನಿಕ ಮತ್ತು ಸಮಕಾಲೀನ ಅಂಶಗಳನ್ನು ಪ್ರದರ್ಶಿತ ಭಾಷೆಗಳಲ್ಲಿ ಯಶಸ್ವಿಯಾಗಿ ನಿರ್ದೇಶಿಸಿ, ಪ್ರಯೋಗಿಸಿ, ಅನ್ವೇಷಿಸುತ್ತಿದೆ. ಇದು ಕಲೆಯನ್ನು ರಚಿಸಿ ಸಂಯೋಜಿಸಲು ಯುವಜನರನ್ನು  ಉತ್ತೇಜಿಸುತ್ತದೆ. ಹೊಜಾಂಗ್ ಟ್ಯಾರೆಟ್ (ಯುರಿಪಿಡ್ಸ್‌ನ ಗ್ರೀಕ್ ದುರಂತ ಕಥೆ) ನಾಟಕವು 2017 ರಲ್ಲಿ 19 ನೇ ಭಾರತ ರಂಗ ಮೊಹೋತ್ಸವದಲ್ಲಿ ಭಾಗವಹಿಸಿತ್ತು. ತಂಡವು 2018 ರಲ್ಲಿ ನಡೆದ 8 ನೇ ರಂಗ ಒಲಿಂಪಿಕ್‌ ನಲ್ಲಿ ಅದೇ ನಾಟಕವನ್ನು ಪ್ರದರ್ಶಿಸಿತು. ಈ ತಂಡವು . 2018 ರಲ್ಲಿ ನಡೆದ ರಂಗಭೂಮಿ ಪ್ರಶಸ್ತಿಗಳ ಮಹೀಂದ್ರಾ ಎಕ್ಸಲೆನ್ಸಿಯ 13 ನೇ ಆವೃತ್ತಿಯಲ್ಲಿ ಮೂರು ಪ್ರಶಸ್ತಿಗಳನ್ನು ಗೆದ್ದುಕೊಂಡಿತು

ಪಾತ್ರವರ್ಗ ಮತ್ತು ತಂತ್ರಜ್ಞರು

ವೇದಿಕೆ ಮೇಲೆ-                                    ತ್.ಜತಿಶೋರ್‌ ಸಿಂಗ್‌

ಬಿ.ಸನತೋಂಬ ಶರ್ಮ

ಎಚ್.‌ ದರಬರಿ ಶರ್ಮ

ಹಿರಾ ಹಿಡಾಮ್‌, ಏ. ಚಿರಂಜಿತ್‌ ಸಿಂಗ್‌

ಬಿ. ಬೋನೇಂದ್ರೊ ಶರ್ಮ

ಖ್.‌ ನ್ಗಾನ್‌ತೊಯ್ಲೀಮಾ ಚಾನು

ಎಂ. ಪ್ರಿಯೋನಿಕ ಚಾನು

ಖ್.‌ ಸನತೋಂಬಿ ಚಾನು

W. ಕಿರಣ್‌ ಬಾಲ ದೇವಿ

 

ರೂಪಲೀಮ್

ನಾಟಕದ ಕುರಿತು

ರೂಪಲೀಮ್ ಕಥೆಯು ಬುಡಕಟ್ಟು ಸಂಸ್ಕೃತಿಯ ಹಿನ್ನೆಲೆಯಲ್ಲಿ ಚಿತ್ರಿಸಲಾದ ದುರಂತ ಪ್ರೇಮಕಥೆಯಾಗಿದೆ. ರೂಪ್ಕೋನ್ವರ್ ಅಗರ್ವಾಲಾ ಅವರ ನಾಟಕವು ಓದುಗರಿಗೆ ಬಹಳ ಮೆಚ್ಚುಗೆಯಾಗಿದೆ. ಈ ನಾಟಕದಲ್ಲಿ ಬರುವ ಮಾತಿನ ತೀಕ್ಷ್ಣತೆ ಮತ್ತು ಪಾತ್ರಗಳ ಚಿತ್ರಣವು ಜನರ ಹೃದಯದಲ್ಲಿ ಆಳವಾಗಿ ಉಳಿಯುವಂತೆ ಮಾಡಿದೆ. ಮಾಯಾಬೋ, ರೂಪಲೀಮ್, ಮೋನಿಮುಗ್ಧ, ಎಟಿವೆನ್ ಮತ್ತು ಉಳಿದ ಪಾತ್ರಗಳ ಪರಿಕಲ್ಪನೆ ಮತ್ತು ಪ್ರಸ್ತುತಿಯು ಸರಿಯಾದ ವಾತಾವರಣವನ್ನು ಕಲ್ಪಿಸುವಲ್ಲಿ ಹಾಗೂ ಸುಂದರವಾದ ಪ್ರೇಮಕಥೆಯ ದುರಂತಮಯ ಅಂತ್ಯಕ್ಕೆ ಕಾರಣವಾಗುವ ನಾಟಕಕಾರನ ಕೌಶಲ್ಯದ ಬಗ್ಗೆ ಸಾಕಷ್ಟು ಮಾತನಾಡುತ್ತದೆ.

ನಿರ್ದೇಶಕರ ನುಡಿ

ರೂಪಲೀಮ್ ನಾಟಕವು ಅಸ್ಸಾಮಿ ನಾಟಕ ಜಗತ್ತಿಗೆ ಶ್ರೇಷ್ಠ ಕೊಡುಗೆಯಾಗಿದೆ ಎಂಬ ಮೆಚ್ಚುಗೆ ಪಡೆದಿದೆ. ರೂಪಲೀಮ್‌ನ ತಯಾರಿಕೆಯಲ್ಲಿ, ನಾಟಕಕಾರನು ಮಾರಿಸ್ ಮೇಟರ್‌ಲಿಂಕ್‌ನ ಮನ್ನಾ ವನ್ನಾ, ಜ್ಯೋತಿ ಪ್ರಸಾದ್ ಅಗರ್‌ವಾಲ್ ನಾಟಕದಿಂದ ಸ್ಫೂರ್ತಿ ಪಡೆದಂತೆ ತೋರುತ್ತದೆ. ತನ್ನನ್ನು ತ್ಯಾಗ ಮಾಡುವ ರೂಪಲೀಮ್, ಸುಂದರ, ಪ್ರಶಾಂತ ಮತ್ತು ಸರಳ ಬುಡಕಟ್ಟು ಹುಡುಗಿಯಾಗಿದ್ದು, ಬುದ್ಧಿವಂತಿಕೆ ಮತ್ತು ಲೋಕ ಜ್ಞಾನವನ್ನು ಹೊಂದಿರುವುದಿಲ್ಲ, ಆದರೆ ಮೋನಿಮುಗ್ಧವು ಕ್ರೌರ್ಯ, ಶ್ರೀಮಂತಿಕೆ, ಐಷಾರಾಮಿ, ಕಾಮ, ನಿರಂಕುಶಾಧಿಕಾರ ಮತ್ತು ಭಾವನಾತ್ಮಕ ಕಲ್ಪನಾಚಿತ್ರದ ಮಿಶ್ರಣವಾಗಿದೆ.. ಎಟಿವಾನ್ ರಾಷ್ಟ್ರದ ಗೌರವ ಮತ್ತು ಪ್ರತಿಷ್ಠೆಯ ಸಂಕೇತವಾಗಿದ್ದು, ಪ್ರೀತಿ ಮತ್ತು ಅಸೂಯೆಯ ಸ್ತ್ರೀ ಲಕ್ಷಣಗಳನ್ನು ಸಹ ಹೊಂದಿದ್ದಾರೆ. ಪಾಶ್ಚಿಮಾತ್ಯ ನಾಟಕದ ಪ್ರಭಾವದ ಹೊರತಾಗಿಯೂ, ನಾಟಕಕಾರನು ಅಸ್ಸಾಂನ ಪೂರ್ವ ಗಡಿಯ ವಿಶಿಷ್ಟ ಜನಾಂಗೀಯ ಹಿನ್ನೆಲೆಯನ್ನು ಮೂಲದಿಂದ ನಿರ್ಮಿಸುತ್ತಾನೆ.

ನಿರ್ದೇಶಕ

ಸಿಮಂತ ಫುಕನ್ ಅಸ್ಸಾಂ ನ ಅತ್ಯಂತ ಪ್ರತಿಭಾವಂತ ರಂಗಭೂಮಿ ಮತ್ತು ಸಿನಿ ಕಾರ್ಯಕರ್ತರಲ್ಲಿ ಒಬ್ಬರು. ಅವರು ಹಲವಾರು ಅಸ್ಸಾಮಿ ನಾಟಕಗಳನ್ನು ನಿರ್ದೇಶಿಸಿ ಅಭಿನಯಿಸಿದ್ದಾರೆ. ಈ ನಾಟಕಗಳು ಅಸ್ಸಾಂನ ಒಳಗೆ ಮತ್ತು ಹೊರಗೆ ವಿವಿಧ ಪ್ರತಿಷ್ಠಿತ ನಾಟಕೋತ್ಸವದಲ್ಲಿ ವ್ಯಾಪಕವಾಗಿ ಪ್ರದರ್ಶನಗೊಂಡಿವೆ. ಅವರ ಅವಿರತ ಪ್ರಯತ್ನಗಳು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳನ್ನು ಒಳಗೊಂಡಂತೆ ಅವರ ವೃತ್ತಿಜೀವನಕ್ಕೆ ಪ್ರಶಸ್ತಿಗಳನ್ನು ತಂದುಕೊಟ್ಟಿವೆ. ಸಿನಿ ರಚನೆಗಳು ವಿಮರ್ಶಕರ ಗಮನವನ್ನು ಸೆಳೆಯಲು ಸಮರ್ಥವಾಗಿವೆ. ಜೋಯಿಮೋತಿ, ಕಮಲಾ ಕುನ್ವಾರಿ, ಸಾಂತಾ-ಸಿಸ್ತಾ ಹೃಸ್ತಾ-ಪುಸ್ತ ಮೊಹದುಸ್ತಾ, ಸೆಯುಜಿಯಾ ಗಾಡಿ, ಜಿತು ನಿತೂರ್ ಅವಿಜನ್, ಗುಬರ್ಧನ್ ಚರಿತ್, ಅನ್ಯಾ ಆಕಾಶ್, ಪಾಪ್, ಟಿಯರ್ಸ್ ಆಫ್ ರೈನ್ ಇತ್ಯಾದಿ. ಕಿರುಚಿತ್ರ, ವಿಡಿಯೋ ಚಿತ್ರ ಮತ್ತು ದೂರದರ್ಶನದ ಧಾರಾವಾಹಿಗಳು ಅವರ ಕೆಲವು ಅತ್ಯುತ್ತಮ ಕೃತಿಗಳಾಗಿವೆ. ಪ್ರಸ್ತುತ ಅವರು ಈಶಾನ್ಯ ರಂಗ ಅಕಾಡೆಮಿ ((NETA)), ದೆರ್ಗಾಂವ್, ಗೋಲಾಘಾಟ್, ಅಸ್ಸಾಂ ಇದರ ನಿರ್ದೇಶಕರಾಗಿದ್ದಾರೆ, ಇದು ವೇದಿಕೆ ಮತ್ತು ಚಲನಚಿತ್ರ ನಟನೆಯ ತರಬೇತಿಯ ಕ್ಷೇತ್ರದಲ್ಲಿ ಪ್ರಥಮ ಸಂಸ್ಥೆಯಾಗಿದೆ.

 

ನಾಟಕಕಾರ

ರೂಪ್ಕೋನ್ವರ್ ಜ್ಯೋತಿ ಪ್ರಸಾದ್ ಅಗರ್ವಾಲಾ (17 ಜೂನ್ 1903-17 ಜನವರಿ 1951) ಅಸ್ಸಾಂನ ಪ್ರಸಿದ್ಧ ನಾಟಕಕಾರ, ಗೀತರಚನೆಕಾರ, ಕವಿ, ಬರಹಗಾರ ಮತ್ತು ಚಲನಚಿತ್ರ ನಿರ್ಮಾಪಕ. ಅವರನ್ನು ಅಸ್ಸಾಮಿ ಸಾಂಸ್ಕೃತಿಕ ಐಕಾನ್ ಎಂದು ಪರಿಗಣಿಸಲಾಗಿದ್ದು, ಅವರ ಸೃಜನಶೀಲ ದೃಷ್ಟಿ ಮತ್ತು ರಚನೆಗಾಗಿ ಆಳವಾಗಿ ಮೆಚ್ಚುಗೆಗೊಳಪಟ್ಟರು ಮತ್ತು ಅಸ್ಸಾಮಿ ಸಂಸ್ಕೃತಿಯ ' ರೂಪ್ಕೋನ್ವರ್' ಎಂದು ಜನಪ್ರಿಯವಾದರು. ವಾಸ್ತವವಾಗಿ, ಅವರು ತಮ್ಮ ಚಲನಚಿತ್ರ ಜಾಯ್ಮತಿ (1935) ಗಾಗಿ ಅಸ್ಸಾಮಿ ಚಲನಚಿತ್ರದ ಸ್ಥಾಪಕ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಅವರ ಗೌರವ ಸ್ಮರಣೆಗಾಗಿ ಮರಣ ವಾರ್ಷಿಕೋತ್ಸವವನ್ನು (ಜನವರಿ 17) ಶಿಲ್ಪಿ ದಿವಸ್ (ಕಲಾವಿದರ ದಿನ) ಎಂದು ಆಚರಿಸಲಾಗುತ್ತದೆ.

ತಂಡ

ನಾರ್ತ್ ಈಸ್ಟ್ ಥಿಯೇಟರ್ ಅಕಾಡೆಮಿಯನ್ನು 2006 ರಲ್ಲಿ ಅಸ್ಸಾಂನ ಗೋಲಾಘಾಟ್ ಜಿಲ್ಲೆಯ ದೆರ್ಗಾಂವ್‌ನಲ್ಲಿ ಸ್ಥಾಪಿಸಲಾಯಿತು. ಹೊಸ ಪೀಳಿಗೆಗೆ ವ್ಯವಸ್ಥಿತವಾಗಿ ರಂಗ ಮತ್ತು ಚಲನಚಿತ್ರ ನಟನೆಯನ್ನು ನೀಡುವುದು ಈ ಅಕಾಡೆಮಿಯ ಉದ್ದೇಶವಾಗಿದೆ. ತಂಡವು ವಿವಿಧ ರಂಗಭೂಮಿ ನಿರ್ಮಾಣಗಳನ್ನು ಪ್ರದರ್ಶಿಸುತ್ತದೆ, ಸೆಮಿನಾರ್‌ಗಳನ್ನು ಆಯೋಜಿಸುತ್ತದೆ, ನಾಟಕ ಮತ್ತು ಸಾಂಪ್ರದಾಯಿಕ ನಾಟಕಗಳ ಕುರಿತು ಕಾರ್ಯಾಗಾರಗಳನ್ನು ಆಯೋಜಿಸುತ್ತಿದೆ. ಅಕಾಡೆಮಿಯು ಅಸ್ಸಾಂನ ಒಳಗೆ ಮತ್ತು ಹೊರಗೆ ಹಲವಾರು ನಾಟಕೋತ್ಸವಗಳಲ್ಲಿ ಭಾಗವಹಿಸಿದೆ. ಇದರ ವಿದ್ಯಾರ್ಥಿಗಳು ಎರಡು ಜನಪ್ರಿಯ ಅಸ್ಸಾಮಿ ಚಲನಚಿತ್ರಗಳು, ದೂರದರ್ಶನ ಧಾರಾವಾಹಿಗಳು, ಮೊಬೈಲ್ ಥಿಯೇಟರ್ ಮತ್ತು ವೀಡಿಯೊ ಸರಣಿಗಳಲ್ಲಿ ನಟಿಸಿದ್ದಾರೆ.

 

 ಪಾತ್ರವರ್ಗ ಮತ್ತು ತಂತ್ರಜ್ಞರು

 

ರೂಪಲೀಮ್-‌ ಪ್ರಾಂತಿಕ ನಿಯೋಗ್‌

ಮಯೋಬ – ಪರಮ ನಂದ ಸೈಕಿಯ

ಝುನಾಫಾ- ಕೃಷ್ಣ ಭುಯಾನ್‌

ರೆಂತಿಯಂಗ್‌ - ತಿಲಕ್‌ ಬೋರಾಹ್‌

ಲಿಗಿರಿ ನಂ.1 – ಕರಿಷ್ಮ ತ್ರಿಶಾ ಹಝರಿಕ

ಲಿಗಿರಿ ನಂ.2 – ಜೆಚಿಕ ಭುಯನ್‌

ಲಿಗಿರಿ ನಂ.3 – ಟೀನಾ ಬೋರಾಹ್‌

ಸಹ ಕಲಾವಿದರು – ಅರುಣ್‌ ಸರ್ಮ, ಸಯದ್‌ ಎಸ್ಮೆ ಅಲಾಮ್‌, ರಂಜು ಪಾತಕ್‌, ಮನೋಜ್‌ ಕುಮಾರ್‌ ಸೈಕಿಯಾ, ನಬಾ ಜ್ಯೋತಿ ಬೋರಾ, ಧೀರಜ್‌ ಕಲಿತ, ನಿಲುತ್‌ ಪಾಲ್‌ ಬೋರಾ, ರಂತು ಬೋರಾ, ಧರ್ಮೇಸ್ವರ್‌ ಸೈಕಿಯಾ, ಧೃಬ ಪ್ರತಿಮ್‌ ಸತೋಲಾ, ಪರಿಶ್ಮಿತ ಬಿದ್ಯಾರ್ಥಿ, ಗಿತಿಕಾ ಫುಕಾನ್‌, ಹಿಯಾಂಗಿ ಫುಕನ್

 ನೃತ್ಯ ನಿರ್ದೇಶಕ – ಕರಿಶ್ಮ ತ್ರಿಷಾ ಹಝಾರಿಕಾ

ವೇದಿಕೆ ವಿನ್ಯಾಸ - ರಂಜು ಪಾತಕ್‌, ಜ್ಯೋತಿ ಗಗನ್‌

ವೇಷಭೂಷಣ ಮತ್ತು ಬನಾವಣೆ – ಗಿತಿಕಾ ಫುಹಾನ್‌ ಮತ್ತು ಎಲ್ಲಾ ಕಲಾವಿದರು

ರಂಗಪರಿಕರ –  ಪ್ರಕಾಶ್‌ ಚಕ್ರಬೋರ್ಟಿ, ಮನೋಜ್‌ ಕುಮಾರ್‌ ಸೈಕಿಯಾ

ಬೆಳಕು ವಿನ್ಯಾಸ – ಬಿಕಾಶ್‌ ದೊವಾರ

ತಂಡದ ನಾಯಕ – ಅರುಣ್‌ ಸರ್ಮ

ನಾಟಕಕಾರ- ರೂಪ್ಕೊನ್ವಾರ್‌ ಜ್ಯೋತಿಪ್ರಸಾದ್‌ ಅಗರ್ವಾಲ

ಸಂಗೀತ ಸಂಯೋಜನೆ ಮತ್ತು ನಿರ್ದೇಶಕ – ಸಿಮಂತ ಫುಕಾನ್‌ 

 

ಚಾಂಪಿಯನ್

ಚಾಂಪಿಯನ್ ಎಂಬುದು ನಿಜವಾದ ಸಂತೋಷಕ್ಕಾಗಿ ನಿರಂತರ ಹುಡುಕಾಟ ನಡೆಸುತ್ತಿರುವ ಒಂದು ಚಿಕ್ಕ ಹುಡುಗನ ಕಾಲ್ಪನಿಕ ಕಥೆ. ಮತ್ತೊಂದೆಡೆ, ಯುವತಿಯೊಬ್ಬಳು ಕತ್ತಲೆಯ ಪ್ರಪಂಚದಲ್ಲಿ ತನ್ನ ಸಂತೋಷವನ್ನು ಕಳೆದುಕೊಳ್ಳುತ್ತಾಳೆ. ನಾಟಕವು ಶಿಕ್ಷಣದ ತತ್ವವಾದ  ʼನೀವು ಬೋಧಿಸುವುದನ್ನು ಅಭ್ಯಾಸ ಮಾಡಿʼ ಎಂಬುದನ್ನು ಚಿತ್ರಿಸುತ್ತದೆ, ನಾಟಕವು ಸಂಪೂರ್ಣವಾಗಿ ಸ್ವಾತಂತ್ರ್ಯವೆಂಬ ನಿಜವಾದ ಸಂತೋಷದ ಹುಡುಕಾಟದ ಮೇಲೆ ಕೇಂದ್ರೀಕೃತವಾಗಿದೆ. ಆರಂಭಿಕ ದೃಶ್ಯದಲ್ಲಿ ಮೊದಲ ಮೂರು ಪದಗಳಾದ 'ಕಳ್ಳತನ, ಕೊಲ್ಲು ಮತ್ತು ನಾಶಮಾಡುʼ ಎಂಬುದನ್ನು ಬೈಬಲ್‌ನಿಂದ ತೆಗೆದುಕೊಳ್ಳಲಾಗಿದೆ (ಜಾನ್ 10:10). ಬೈಬಲ್ ನ ಪ್ರಕಾರ ಸೈತಾನ (ಶತ್ರು) ಎಂದು ಕರೆಯಲ್ಪಡುವ ಕಳ್ಳನು ಕದಿಯಲು, ಕೊಲ್ಲಲು ಮತ್ತು ನಾಶಮಾಡಲು ಬರುತ್ತಾನೆ. ಶತ್ರುಗಳ ಕಾರ್ಯಗಳು ಎಂದಿಗೂ ಕ್ರೌರ್ಯವಾಗಿರುತ್ತದೆ. ಆದರೆ ದೇವರ ಕರುಣೆಯಿಂದ ಕ್ರೌರ್ಯವನ್ನು ಜಯಿಸುವ ಶಕ್ತಿ ಇರುತ್ತದೆ. ಆರಂಭಿಕ ದೃಶ್ಯದಲ್ಲಿ ಹುಡುಗಿಯು ಮಾತೃಭೂಮಿ ಅಥವಾ ತಾಯಿನಾಡನ್ನು ಬಿಂಬಿಸುತ್ತಾಳೆ. ಶತ್ರುಗಳು ಅವಳ ಸಂತೋಷವನ್ನು (ಸ್ವಾತಂತ್ರ್ಯ) ಕಿತ್ತುಕೊಂಡ ಸಲುವಾಗಿ ತನ್ನ ಜೀವನವನ್ನು ಗೊಂದಲಮಯ ಮತ್ತು ಆಳವಾದ ಸಂಕಟದಲ್ಲಿ ಮುನ್ನಡೆಸುತ್ತಿರುತ್ತಾಳೆ. ನಾಟಕದ ಕಥೆಯನ್ನು ಅವಳ ಮತ್ತು ಅವಳ ಪ್ರೀತಿಯ ಮಗನ ಬಗ್ಗೆ ಹೆಣೆಯಲಾಗಿದೆ.

ನಿರ್ದೇಶಕ ಮತ್ತು ನಾಟಕಕಾರ

ವಿ. ಉಟೊ ಚಿಶಿ 2007 ರಲ್ಲಿ ನಾಗಾಲ್ಯಾಂಡ್‌ನ ದಿಮಾಪುರ್‌ ಸಾಲ್ಟ್ ಕ್ರಿಶ್ಚಿಯನ್ ಕಾಲೇಜಿನಿಂದ ಪದವಿ ಪಡೆದರು. ಇವರು 2012 ರಲ್ಲಿ ನವದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಸಂಸ್ಥೆಗೆ ಸೇರಿ, ನಟನೆಯಲ್ಲಿ ಪರಿಣತಿಯನ್ನು ಪಡೆದರು. ಇವರು 2012-13 ನೇ ಸಾಲಿನಲ್ಲಿ ಮಣಿಪುರದ ಇಂಫಾಲ್‌ನ ಕಲಾಕ್ಷೇತ್ರದಲ್ಲಿ ಎಚ್. ಕನ್ಹಲ್ಲಾಲ್ ಅವರ ಮಾರ್ಗದರ್ಶನದಡಿ ಆರು ತಿಂಗಳ ಶಿಷ್ಯವೇತನವನ್ನು ಪೂರ್ಣಗೊಳಿಸಿದರು. ನಂತರ 2014 ರಲ್ಲಿ ಅವರು ದಿಮಾಪುರ್‌ನ ಸ್ಪಿರಿಟ್ ಆಫ್ ಫೇಯ್ತ್‌ ಬೈಬಲ್ ಸ್ಕೂಲ್‌ನಿಂದ ಬೈಬಲ್‌ನಲ್ಲಿ ಪದವಿ ಪಡೆದರು. 2015 ರಲ್ಲಿ ಅವರು ಸುಮಿ ಆಡುಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಅರ್ಥೈಸಿಕೊಳ್ಳಲು ದಿಮಾಪುರದ ತಿಲಿಕು ಗ್ರಾಮದ ಸುತ್ಸಾ ಅಕಾಡೆಮಿಯಲ್ಲಿ ಅಧ್ಯಯನ ಮಾಡಿದರು. ಅವರು ‌ ಕಾನ್ಫ್ಲಿಕ್ಟ್‌ ವಿತಿನ್ ಮತ್ತು ಡೋರಾ ಒ' ಡೋರಾ  ಎಂಬ ಎರಡು ನಾಟಕದ ಏಕವ್ಯಕ್ತಿ ಪ್ರದರ್ಶನಗಳನ್ನು ಮಾಡಿದ್ದಾರೆ. ಇವರು ʼ ರೀಬಿಲ್ಟ್‌ ಅವರ್‌ ಕಮ್ಯೂನಿಟಿ – ಟ್ರಾನ್ಸಿಷನ್‌ ಆಫ್‌ ಅವರ್‌ ನಾಗಾ ಸೊಸೈಟಿʼ, ʼಬೈಬಲ್‌ನಿಂದ ಮೂರು ದೃಷ್ಟಾಂತಗಳುʼ, ದಿ ಪ್ರೋಡಿಗಲ್ ಸನ್ ಆಸ್ ದಿ ಫಾದರ್ಸ್ ಲವ್: ದಿ ಸ್ಟೋರಿ ಆಫ್ ಜೋಸೆಫ್; ಮತ್ತು ಸ್ಟೋರಿ ಆಫ್ ಡೇನಿಯಲ್ ಎಂಬ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಅವರು ಮೂರು ಸುಮಿ ಜಾನಪದ ಕಥೆಗಳಾದ ಇನಾಖಾ ಎನ್ಗೊ ಘೋನಿಲಿ, ನಿಸಾಪ ಎನ್ಗೊ ನಿಸಾಲಾ ಮತ್ತು ಖಾಕು ಎನ್ಗೊ ಶೆಲ್ಲಿ ಎಂಬ ನಾಟಕಗಳನ್ನು ನಿರ್ದೇಶಿಸಿ ನಟಿಸಿದ್ದಾರೆ. ಅವರು, ಜೋನಾಹಾ ಬೈಬಲ್ ಸ್ಟೋರಿ ಮ್ತತು ಲಿಯೋ ಟಾಲ್‌ಸ್ಟಾಯ್  ಬರೆದ ವಾಟ್ ಮೆನ್ ಲೈವ್‌ನಿಂದ ರೂಪಾಂತರಗೊಂಡ ನಾಟಕ ದಿ ತ್ರೀ ಟ್ರುತ್ ಅನ್ನು ನಿರ್ದೇಶಿಸಿದ್ದಾರೆ. ಅವರು ದಿಮಾಪುರ್ ಪ್ರದೇಶದಲ್ಲಿ ಅನೇಕ ಶಾಲೆಗಳು ಮತ್ತು ಚರ್ಚ್‌ಗಳೊಂದಿಗೆ ಕೆಲಸ ಮಾಡಿದ್ದಾರೆ ಮತ್ತು ಮಾಯಾಂಗ್ನೋಕ್ಚಾ ಪ್ರಶಸ್ತಿ ಟ್ರಸ್ಟ್, ಅಸೋಸಿಯೇಟ್ ಪರ್ಫಾರ್ಮಿಂಗ್ ಆರ್ಟ್ಸ್ ಮತ್ತು ಥಿಯೇಟ್ರಿಕಲ್ ಮೊಕೊಕ್‌ಚುಂಗ್‌ನೊಂದಿಗು ಕಾರ್ಯನಿರ್ವಹಿಸಿದ್ದಾರೆ.  ಅವರು ಪ್ರಸ್ತುತ ಲಿವಿಂಗ್ಸ್ಟೋನ್ ಫೌಂಡೇಶನ್  ಸೆಕ್ ಶಾಲೆಯಲ್ಲಿ ಸುಮಾರು ನಾಲ್ಕು ವರ್ಷಗಳಿಂದ ಸಹಾಯಕ ನಾಟಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ., ಮತ್ತು ನಾಗಾಲ್ಯಾಂಡ್‌ನ, ದಿಮಾಪುರ್ ಯೂನಿಟಿ ಕಾಲೇಜ್ ಆಫ್ ಟೀಚರ್ ಎಜುಕೇಶನ್, ಸಂಸ್ಥೆಯಲ್ಲಿ ಪ್ರದರ್ಶನ ಕಲೆಗಳ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. 

ತಂಡ

ಝೋಯ್ ಎಂದರೆ ಗ್ರೀಕ್ ಭಾಷೆಯಲ್ಲಿ ಆಧ್ಯಾತ್ಮಿಕ ಅಸ್ತಿತ್ವ ಎಂದರ್ಥ. ಸುಮಿ ಬುಡಕಟ್ಟಿನ ಜಾನಪದ ಕಥೆಯಾದ ನಿಸಾಪ ಮತ್ತು ನಿಸಾಲಾ ತಂಡದ ಮೊದಲ ನಿರ್ಮಾಣವಾಗಿದೆ ಮತ್ತು ದಿಮಾಪುರ ಪ್ರದೇಶದ ವಿವಿಧ ಚರ್ಚ್‌ಗಳಲ್ಲಿ ಪ್ರದರ್ಶನ ನೀಡಿದೆ. ಝೋಯ್ ನಾಟ್ಯಮಂದಿರವು ದಿಮಾಪುರ್‌ನಲ್ಲಿ ನಡೆದ ಗಿಡಿಯಾನ್‌ರ ಬೈಬಲ್‌ ಇಂಟರ್‌ನ್ಯಾಶನಲ್‌ ಸಿಲ್ವರ್‌ ಜುಬಿಲಿ ಸಂದರ್ಭದಲ್ಲಿ ಪ್ರದರ್ಶನ ನೀಡಿದೆ. ಬೈಬಲ್‌ನಲ್ಲಿನ ಜೋನ್ನಾ ಕಥೆಯಿಂದ ರೂಪಾಂತರಗೊಂಡ ನಾಗಾಲ್ಯಾಂಡ್, ಸೀಕ್ ದಿ ಲಾಸ್ಟ್ ಎಂಬ ನಾಟಕವು ಬಾರಿ ಯಶಸ್ಸನ್ನು ಕಂಡಿತು.

 

ಪಾತ್ರವರ್ಗ ಮತ್ತು ತಂತ್ರಜ್ಞರು

 

ಮೇಳ (ನಾಯಕ) – ನಿಟೋಕಿ ಹೆಚ್.‌ ಅಚುಮಿ

ಮೇಳ 1 – ಬೇಟೊ

ಮೇಳ 2-  ಟೊಕವಿ ಯೆಪ್ತೊ

ಮೇಳ 3 – ಅಲೋವಿಟೊ ಯೆಪ್ತೊ

ಮೇಳ 4 – ಬೋಲಿಕಾ ಯೆಪ್ತೊ

ಮೇಳ 5 – ಪುಲೋಟೊ ಆಯೆ

ಮೇಳ 6 – ಅಕಾಹೋ ಯೆಪ್ತೊ

ಮೇಳ 7 – ಕಿವಿಹೋ ಯೆಪ್ತೊ

ಮೇಳ 8 – ವಿಕಿಲಿ ವಿ. ಶೋಹೆ

ಹುಡುಗಿ – ಕಿಕಾಲಿ ಚಿಶಿ

ಪೀಟರ್‌ - ಝಿಮೋ ಝಿಮೋಮಿ

ಅಲಿನೊ – ಕಿಕಾಲಿ ಝಿಮೋಮಿ

ಮಿ. ಜಿಮ್ಮಿ – ನಿಕಾಟೊ ಝಿಮೋಮಿ

ಶಾಲಾ ಮಕ್ಕಳು – ಮುಘಾನಿ, ವಿಕಿಲಿ, ಬೇಟೊ, ಅಕಾಹೊ, ಝಿಮೋ, ನಿಕೋಟಿ, ಕಿವಿಹೋ, ಬೋಲಿಕ

ಪೀಟರ್‌ನ ಅಣ್ಣ – ವಿಹೋಕ ಯೆಪ್ತೋ

ಪೀಟರ್‌ನ ಸ್ನೇಹಿತ 1 – ಪುಲೋಟೊ ಆಯೆ

ಪೀಟರ್‌ನ ಸ್ನೇಹಿತ 2 – ನಿಕೋಟಿ ಹೆಚ್.‌ ಅಚುಮಿ

ವ್ಯವಸ್ಥಾಪಕ – ಮುಘಾಮಿ ಚಿಸಿ

ಜುಡಾಸ್‌ - ವಿಕಟೋ ಯೆಪ್ತೊ

ಲಿಂಡ – ಲಿವಿನೊ ಅಚುಮಿ

ನಿಕಿವಿ – ಲೊವಿಟೊಲಿ ಅಚುಮಿ

ಪೀಟರ್‌ನ ತಂದೆ ಮತ್ತು ಬೋಧಕ – ಬೊಕಾವಿ ಸ್ವು

ಪೀಟರ್‌ನ ತಾಯಿ – ಅಘಲಿಕ

ಅಜ್ಜಿ ಮತ್ತು ಮಾಲಿಕೆ – ಅನಾಲಿ ಸುಮಿ

ಧ್ವನಿ ಮತ್ತು ಬೆಳಕು – ಕಿಕೈತೊ ಝಿಮೊ

ಗೀತ ಸಂಯೋಜನೆ – ಚಾರ್ಲಿ ಚೋಫಿ (ಪ್ಯಾಸ್ಟರ್)‌

ಛಾಯಗ್ರಾಹಕ –

ಬರಹ, ವಿನ್ಯಾಸ ಮತ್ತು ನಿರ್ದೇಶನ -

 

 "ಹೇ ಚಟ್ಲೋ

ನಾಟಕದ ಕುರಿತು

ಮಳೆಗಾಲದ ರಾತ್ರಿ, ಯುವ ದಂಪತಿಗಳು ಸುಂದರವಾದ ಬೃಹತ್ ನಗರಕ್ಕೆ ಆಗಮಿಸುತ್ತಾರೆ. ಮಹಿಳೆಯು ಗರ್ಭಾವಸ್ಥೆಯ ಕೊನೆಯ ಹಂತವನ್ನು ತಲುಪಿರುತ್ತಾಳೆ. ಆಕೆಯ ಪತಿ ಪ್ರತಿ ದಾರಿಹೋಕರಿಂದಲೂ ಸಹಾಯವನ್ನು ಕೇಳುತ್ತಿರುತ್ತಾನೆ ಆದರೆ ಯಾವುದೇ ಪ್ರಯೋಜನವಾಗುವುದಿಲ್ಲ. ರಸ್ತೆ ಬದಿಯಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ. ದಂಪತಿಗಳು ದಾರಿಹೋಕರನ್ನು ತಮ್ಮ ಮಗಳಿಗೆ ಹೆಸರೊಂದನ್ನು ಇಡಲು ವಿನಂತಿಸುತ್ತಾರೆ. ಹಲವು ಹೆಸರುಗಳು ಬರುತ್ತವೆ ಆದರೂ ಯಾವ ಹೆಸರು ಕೂಡ ಮಗುವಿಗೆ ಸರಿಹೊಂದುವುದಿಲ್ಲ, ಏಕೆಂದರೆ ಅವಳು ಕಷ್ಟಜೀವಿಯಾಗಿ ಜನಿಸಿದವಳು. ಅಧಿಕಾರಿ ಮತ್ತು ಜೆಸಿಬಿಯೊಂದು ಸ್ಥಳಕ್ಕೆ ಧಾವಿಸುತ್ತಾ  "ಹೇ ಚಟ್ಲೋ" (ದೂರ ಹೋಗು) ಎಂದು ಕೂಗುತ್ತಾ ದಂಪತಿಯನ್ನು ಓಡಿಸುತ್ತಾರೆ ಅವರು ಮಗುವಿಗೆ ಹೇ ಚಟ್ಲೋ ಎಂದು ಹೆಸರಿಡುತ್ತಾರೆ. ಮಗುವು ಭವಿಷ್ಯದಲ್ಲಿ ದುಃಖಕರ ಜೀವನವನ್ನು ನಡೆಸುತ್ತದೆ ಎಂಬುದನ್ನು ಅರಿತಿದ್ದ ಪೋಷಕರು ಅವಳನ್ನು ದುಃಖದಲ್ಲಿ ಸಂತೋಷವನ್ನು ಕಂಡುಕೊಳ್ಳುವ ರೀತಿಯಲ್ಲಿ ಬೆಳೆಸಲು ನಿರ್ಧರಿಸುತ್ತಾರೆ. ಹುಡುಗಿ ದೊಡ್ಡವಳಾದಾಗ ತನ್ನ ತಂದೆತಾಯಿಯನ್ನು ಅವಳ ಮತ್ತು ಅವರ ಗುರುತನ್ನು ಕೇಳುತ್ತಾಳೆ.  ಅವಳ ಸುತ್ತಲಿನ ಪ್ರಪಂಚವು ವಾಸ್ತವಿಕ, ಅವಳ ಅಸ್ತಿತ್ವ ಮಾತ್ರ ನಿಜವೆಂಬುದನ್ನು ಪೋಷಕರು ಮನವರಿಕೆ ಮಾಡಿಕೊಡುತ್ತಾರೆ. ಇತರರು ಹಾಗೂ ಪೋಷಕರು ಸೇರಿದಂತೆ ಎಲ್ಲರು ಸುಳ್ಳು ಎಂದು ಹೇಳಿ ಅದನ್ನು ಸಾಬೀತುಪಡಿಸಲು ಅವರು ತಮ್ಮ ಜೀವನವನ್ನು ಕೊನೆಗೊಳಿಸುತ್ತಾರೆ. ಎಲ್ಲಾ ನೈಜತೆಗಳನ್ನು ವಾಸ್ತವಿಕ ಎಂದು ನಂಬುತ್ತಾ ಹುಡುಗಿಯು ಸಂತೋಷದಿಂದ ಬದುಕುತ್ತಾಳೆ.

 

 ನಿರ್ದೇಶಕರ ನುಡಿ

ನಾಟಕವು ಅದರ ಸಂಪೂರ್ಣ ಪಠ್ಯ(ಮೆಟಾ-ಫಿಕ್ಷನ್‌ನ ನಂತರದ-ಆಧುನಿಕ ಸಾಹಿತ್ಯ), ವಿನ್ಯಾಸ (ಹೈಪರ್-ರಿಯಲ್, ವಿಡಂಬನೆ) ಮತ್ತು ನಿರ್ದೇಶನದಲ್ಲಿ (ತಂತ್ರಜ್ಞಾನದ ಚಿತ್ರಣ) ನಂತರದ-ಆಧುನಿಕ ರಂಗಭೂಮಿಯ ಕಡೆಗೆ ಚಿತ್ರಣವಾಗಿದೆ. ಎನ್‌ಎಸ್‌ಡಿ, ನವದೆಹಲಿಯಲ್ಲಿ ವಿದ್ಯಾರ್ಥಿಯಾಗಿ ನಾನು, ನನ್ನ ದಿನಗಳಲ್ಲಿ ಯಾವಾಗಲೂ ಆಧುನಿಕೋತ್ತರವಾದಕ್ಕೆ ಮುಂದಾಗಿದ್ದೆ. ನನ್ನ ಹಿಂದಿನ ನಾಟಕ ನಿರ್ಮಾಣಗಳು ಹಾಸ್ಯಮಯ ಮತ್ತು ಹೇಯವಾದ ಸ್ಥಿತಿಯನ್ನು ಹೊರತರುವ ಪ್ರಯತ್ನವಾಗಿತ್ತು. ನೋವು ಮತ್ತು ಸಂಕಟದಿಂದಿರುವ, ಹತಾಶೆ ಮತ್ತು ಅಸಹಾಯಕತೆಯ ಈ ಜಗತ್ತಿನಲ್ಲಿ, ನಾವು ಸಂತೋಷ ಮತ್ತು ಸಮೃದ್ಧಿಯನ್ನು ವಾಸ್ತವ ಜಗತ್ತಿನಲ್ಲಿ ನೆಲೆಸುವ ಮೂಲಕ ಆಚರಿಸುತ್ತಿದ್ದೇವೆ. ನೈಜತೆಯನ್ನು ವಾಸ್ತವಿಕತೆಯೊಂದಿಗೆ ಮಸುಕುಗೊಳಿಸುವ ಆಧುನಿಕ ಸ್ಥಿತಿಯನ್ನು ನಾಟಕದಲ್ಲಿ ವ್ಯಂಗ್ಯವಾಗಿ ಚಿತ್ರಿಸಲಾಗಿದೆ. ಸುಧಾರಣೆಗಳ ಸರಣಿಯ ಪ್ರಕ್ರಿಯೆಯ ಮೂಲಕ ಪಠ್ಯವನ್ನು ಹೆಣೆಯಲಾಗಿದೆ ಮತ್ತು ಪರಿಸ್ಥಿತಿಯನ್ನು ಅನ್ವೇಷಿಸುವ ಮೂಲಕ ಶೀರ್ಷಿಕೆಯನ್ನು ರಚಿಸಲಾಗಿದೆ.

 

ನಿರ್ದೇಶಕರು

ಮಣಿಪುರದ ಇಂಫಾಲ್‌ನಲ್ಲಿ ಜನಿಸಿದ ಲೊಯಿಟೊಂಗ್‌ಬಾಮ್ ಪರಿಂಗನ್‌ಬಾ ಅವರು ತಮ್ಮ ತಂದೆ ಲೊಯಿಟೊಂಗಿಬಾಮ್ ದೊರೆಂದ್ರ ಅವರಿಂದ ಬಾಲ್ಯದ ದಿನಗಳಲ್ಲಿ ರಂಗಭೂಮಿ ಕ್ಷೇತ್ರದಲ್ಲಿ ಮಾರ್ಗದರ್ಶನವನ್ನು ಪಡೆದು ಹತ್ತನೇ ವಯಸ್ಸಿನಲ್ಲಿ ರಂಗ ನಾಟಕಗಳಲ್ಲಿ ಅಭಿನಯಿಸುತಿದ್ದರು. ಡಾ. ಎಸ್ ಥನಿನ್ಲೀಮಾ ಅವರ ನಿರ್ದೇಶನದ ಹಲವಾರು ನಾಟಕಗಳಲ್ಲಿ ನಟಿಸಿದ್ದಾರೆ. ಅವರು 2011 ರಲ್ಲಿ ನವದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ,ಸಂಸ್ಥೆಯಿಂದ ಪದವಿ ಪಡೆದು ವಿನ್ಯಾಸ ಮತ್ತು ನಿರ್ದೇಶನ ಕ್ಷೇತ್ರದಲ್ಲಿ ಪರಿಣಿತಿ ಪಡೆದರು.ಪರಿಂಗನ್ಬಾ ನಿರ್ದೇಶಿಸಿದ ನಾಟಕಗಳು ಮಿರೇಜ್‌ (2011), ಮ್ಯಾನೆಕ್ವಿನ್ (2012). ಚಿನಿ ನುಖುಂಗ್ (ಅಗರ್ತಲಾ, 2013), ನಾಂಗ್‌ಬಾನ್‌ಸೌರ್ (2014). ಮರಿಯೆಜ್ ಬ್ಯೂರೋ (2017), ಹೇ ಚಾಟ್ಲೋ (2018) ಮತ್ತು ಅವರ ಏಳನೇ ನಿರ್ದೇಶನದ ನಾಟಕ ಬೋನ್ಸಾಯ್ (2019) . ಪರಿಂಗಂಬ ಅವರು ಅನೇಕ ಪ್ರಸಿದ್ಧ ರಂಗ ನಿರ್ದೇಶಕರಾದ ಅನುರಾಧಾ ಕಪೂರ್, ಕೀರ್ತಿ ಜೈನ್, ಸಂತಾನು ಬೋಸ್, ಅಭಿಲಾಷ್ ಪಿಳ್ಳೈ, ರಂಜಿತ್ ಕಪೂರ್ ರಾಬಿನ್ ದಾಸ್ ಮ್ತತು ಇತರರೊಂದಿಗೆ ಕಾರ್ಯನಿರ್ವಹಿಸಿದ್ದಾರೆ. ಭಾರತ ರಂಗ ಮಹೋತ್ಸವ, ಅಭಿನಯ ನ್ಯಾಷನಲ್ ಥಿಯೇಟರ್ ಫೆಸ್ಟಿವಲ್ , ಆಕ್ಟೇವ್ ನವೋದಿತ್, ರಾಷ್ಟ್ರೀಯ ಪೂರ್ವೋತ್ತರ ರಂಗ ಉತ್ಸವ್, ಇತ್ಯಾದಿ ಅನೇಕ ರಾಷ್ಟ್ರೀಯ ನಾಟಕೋತ್ಸವಗಳಲ್ಲಿ ಭಾಗವಹಿಸಿದ್ದಾರೆ. ಎನ್‌ಎಸ್‌ಡಿ ಯಿಂದ ಆಯೋಜಿಸಲಾದ ಹಲವು ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಪ್ರಸ್ತುತ ಆಧುನಿಕೋತ್ತರ

 ಅವರು ಪೋಸ್ಟ್ ಮಾಡೆಮ್ ಥಿಯೇಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ

 

ತಂಡ

ಇಂಫಾಲ್ ಥಿಯೇಟರ್ ನಿರಂತರವಾಗಿ ಹಲವು ನಾಟಕೋತ್ಸವದಲ್ಲಿ ಭಾಗವಹಿಸಿದೆ. ಹೈದರಾಬಾದ್‌ನಲ್ಲಿ ನಡೆದ 10 ನೇ ಅಭಿನಯ ರಾಷ್ಟ್ರೀಯ ನಾಟಕೋತ್ಸವ 2015, ಢಾಕಾ (ಬಾಂಗ್ಲಾದೇಶ)ದ ಅಂತರರಾಷ್ಟ್ರೀಯ ಸ್ಥಳೀಯ ನಾಟಕೋತ್ಸವ 2015, 2016 ರಲ್ಲಿ ನಡೆದ ಗುಜರಾತ್‌ನಲ ಆಕ್ಟೇವ್, ಇಂಫಾಲ್‌ನಲ್ಲಿ ನಡೆದ EZCC ನಿಂದ ಆಯೋಜಿಸಲಾದ ನವೋದಿತ್‌ 2016 ಮತ್ತು ಅಸ್ಸಾಂನ ಘೋಲಾಗತ್‌ನಲ್ಲಿ ಪೂರ್ವೋತ್ತರ ನಾಟ್ಯ ಸಮಾರೋಹ ಗಳಲ್ಲಿ ಭಾಗವಹಿಸಿದ್ದಾರೆ. ಮೊಯಿರಾಂಗ್ ಪರ್ವವನ್ನು (ಮಣಿಪುರದ ಸ್ಥಳೀಯ ಸಾಂಪ್ರದಾಯಿಕ ರಂಗಭೂಮಿ) ಪುನರುಜ್ಜೀವನಗೊಳಿಸಲು, ತಂಡವು ಕಳೆದ ಹತ್ತು ವರ್ಷಗಳಿಂದ ಮಣಿಪುರ ರಾಜ್ಯ ಕಲಾ ಅಕಾಡೆಮಿ ಆಯೋಜಿಸಿದ ಆಲ್ ಮಣಿಪುರ ಶುಮಾಂಗ್ ಲೀಲಾ ಉತ್ಸವದಲ್ಲಿ ವಾರ್ಷಿಕವಾಗಿ ಭಾಗವಹಿಸುತ್ತಿದೆ.

 

ಪಾತ್ರವರ್ಗ ಮತ್ತು ತಂತ್ರಜ್ಞರು

 

ಗಂಡ/ ಮಾಪ (ತಂದೆ) – ಮೊಯಿರಂಗ್ತೆಮ್‌ ಬರುಣ್‌

ಹೆಂಡತಿ/ ಮಾಮ(ತಾಯಿ) – ಚೊಂಗ್‌ತಮ್‌ ರೂಪ ದೇವಿ

ಹೇ ಚಟ್ಲೋ – ಅತೋಕ್ಪಮ್‌ ಲನ್ತೊಯಿಬಿ ಚಾನು

ಜೆಸಿಬಿ – ತೌನಾಒಜಾಮ್‌ ದಯಾನಂದ

 ಜಾಹಿರಾತು ಮಾದರಿಗಳು – ಲೊಯಿತೊಂಗ್ಬಮ್‌ ಡೊರೆಂದ್ರ, ಚಿಂಗಖಾಮ್‌ ಮನೋಬ, ಓಕ್ರಮ್‌ ರೋಹಿತ್‌, ಮೋಕ್ಸಮಿ ನಿಂಗೊಂಬಮ್‌, W. ರಂಜನ, L. ಪ್ರಿಯಾ, W. ದೀಪ್ತಿ ಮತ್ತು ರೋಶ್ಣಿ.

ವೇದಿಕೆ ವಿನ್ಯಾಸ – ತ್.‌ ದಯಾನಂದ ಮತ್ತು ಚ್‌. ಮನೋಬ,

ಬೆಳಕು – ಎ.ಮದನ್‌ಕುಮಾರ್‌ ಶರ್ಮ

ವೇಷಭೂಷಣ – ತೊಯಿಡಿನ್ಗಜಾಮ್‌ ಆನಂದಿ ದೇವಿ

ಧ್ವನಿ ಮತ್ತು ಸಂಗೀತ – ಚನಮ್ತಬನ್‌ ಪುನ್ಶಿಬ ಸಿಂಗ್‌

ಗಾಯನ – ಲೈರೆಲ್ಲಕ್ಪಮ್‌ ಚೊಬ ದೇವಿ

ವೇದಿಕೆ ವ್ಯವಸ್ಥಾಪಕ – ತ್.‌ ದಯಾನಂದ

ಪ್ರೊಡಕ್ಷನ್‌ ಮೇಲ್ವಿಚಾರಕ - ಲೊಯಿತೊಂಗ್ಬಮ್‌ ಡೊರೆಂದ್ರ

ಬರಹ, ವಿನ್ಯಾಸ ಮತ್ತು ನಿರ್ದೇಶನ - ಲೊಯಿತೊಂಗ್ಬಮ್‌ ಪರಿನ್ಗಂಬ