Based on Kalidasa’s Malvikagnimitram, Vidisha Prahasana is a comedy. Narrator Apra - Tapra appears at different points in time, connecting the audience to each character and leaving them with unexplored questions, representing issues such as patriarchy, power, politics and hierarchy, this play holds a mirror for society.
Malavika, a princess from Vidarbha is displaced in war and reaches Vidisha, where she is living in disguise as a maiden to the Chief Queen, Dharinidevi. On seeing Malavika in a painting, Agnimitra, the king of Vidisha falls in love with her and wishes to see her in real life. To his rescue, comes the clever Vidooshak, Gautam. They scheme out a successful plan to meet Agnimitra’s desire to see Malavika.
The story continues in Pramodavan where Malavika is sent by Dharini Devi to perform a ritual on the Ashoka tree. Their love affair reaches a point where they are caught red-handed by Iravati and as fate would have it, Malavika is locked up in a ‘Smart House’ by Dharini Devi, which can only be opened by her exclusive Naagmudra ring. Gautam’s new strategy again works out and he manages to extract the ring from her to rescue Malavika.
The play concludes with Dharini’s Ashoka tree blossoming with new flowers, his son Vasumitra becoming the Prince and Malavika’s true identity being revealed. Delighted by these joyful happenings, Dharini Devi accepts Agnimitra and Malavika’s love affair and gets them married.
Agnimitra, even being the king acts as a mere puppet in the hands of the Vidooshak. The play leaves us with a question as to who truly is the king and who is the Vidooshak.
ಕಾಳಿದಾಸನ ‘ಮಾಲವಿಕಾಗ್ನಿಮಿತ್ರಮ್’ನಿಂದ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ‘ವಿದಿಶಾ ಪ್ರಹಸನ’ದ ವರೆಗಿನ ಪಯಣ ತುಂಬ ವಿಶಿಷ್ಟವಾಗಿದೆ. ಕಾಳಿದಾಸನು ತನ್ನ ಕಾಲದ ರಾಜಕೀಯ ಏಳುಬೀಳುಗಳನ್ನು ಚಿತ್ರಿಸುತ್ತಾನೆ. ರಾಜರ ವಿಲಾಸ, ಭೋಗಜೀವನ, ಲೋಲುಪತೆ, ಸೌಂದರ್ಯ-ಸAಗೀತ-ನಾಟ್ಯಪ್ರೇಮ, ನಿಷ್ಕಿçಯತೆ ಹಾಗೂ ಸಮಸ್ಯೆಗಳನ್ನು, ಜನಕಲ್ಯಾಣ ಕಾರ್ಯಗಳನ್ನು ಮುಂದೂಡುವ ತಂತ್ರಗಾರಿಕೆಗಳನ್ನು ಕಟ್ಟಿಕೊಡುತ್ತಾನೆ.
ಮೂಲ ಕಥಾಬೀಜವನ್ನು ಉಳಿಸಿಕೊಳ್ಳುತ್ತಲೇ ಕನ್ನಡದ ನಾಟ್ಯರೂಪದಲ್ಲಿ ಸಾಕಷ್ಟು ಸ್ವಾತಂತ್ರö್ಯವನ್ನು ವಹಿಸಲಾಗಿದೆ. ಈ ನಾಟಕದಲ್ಲಿ ಉತ್ತರ ಕರ್ನಾಟಕದ ಜಾನಪದ ಕಲೆಯಾದ ದೊಡ್ಡಾಟದ ಶೈಲಿ ಮತ್ತು ಭಾಷೆಯನ್ನು ಅಳವಡಿಸಲಾಗಿದೆ. ಕಾವ್ಯಮಯ ಸಂಭಾಷಣೆಯೊAದಿಗೆ ಹಾಸ್ಯದ ಲೇಪನವಿದೆ. ಸಮಕಾಲೀನ ರಾಜಕೀಯ ಮತ್ತು ಸಾಮಾಜಿಕ ಜೀವನದ ಸ್ಪರ್ಶವನ್ನೂ ನೀಡಲಾಗಿದೆ. ಪ್ರಹಸನವು ದೊಡ್ಡಾಟದ ಗರ್ಭದಲ್ಲಿಯೇ ಹಾಸುಹೊಕ್ಕಾಗಿ ಬಂದಿರುವುದರಿAದ ಹಾಸ್ಯ ಮತ್ತು ಮನರಂಜನೆಯ ನೆಪದಲ್ಲಿ ಪ್ರೇಕ್ಷಕರನ್ನು ಚಿಂತನೆಗೆ, ಜೀವನ ವಿಶ್ಲೇಷಣೆಗೆ ತೊಡಗಿಸುವ ಸಾಮರ್ಥ್ಯ ಮತ್ತು ಅವಕಾಶವನ್ನು ಪಟ್ಟಣಶೆಟ್ಟರು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಮೂಲದ ಗೀತಗಳಿಗೆ ವ್ಯತ್ಯಯ ಬರದಂತೆ ಹೊಸ ಹಾಡುಗಳನ್ನು ರಚಿಸಿದ್ದಾರೆ. ಹೊಸ ಭಾಷೆ, ಶಬ್ದಪ್ರಯೋಗ, ಹಾಡಿನ ಗತ್ತು, ಮಟ್ಟುಗಳನ್ನು ಹುಟ್ಟಿಸಿದ್ದಾರೆ. ಅಲ್ಲದೆ ‘ಅಪರಾ’ ಮತ್ತು ‘ತಪರಾ’ ಎಂಬ ವಿಶಿಷ್ಟ ಹೊಸ ಪಾತ್ರಗಳನ್ನೂ ಸೃಜಿಸಿದ್ದಾರೆ.
‘ವಿದಿಶಾ ಪ್ರಹಸನ’ದ ನಿರ್ಮಾಣ ಹಾಗೂ ಪ್ರಯೋಗದಲ್ಲಿ ಹೊಸತನ್ನು ತೋರಿಸಲು ಅಗತ್ಯವಿರುವ ಒಂದು ಮುಕ್ತ ನಾಟಕವನ್ನು, ಅದರ ಶಿಲ್ಪದಲ್ಲಿಯೇ, ಹಸ್ತಪ್ರತಿಯ ಗರ್ಭದಲ್ಲಿಯೇ ನಿರ್ಮಿಸುವ ಕೆಲಸವನ್ನು ಇಲ್ಲಿ ಮಾಡಲಾಗಿದೆ. ಮೂಲ ನಾಟಕಕ್ಕೆ ಯಾವುದೇ ವ್ಯತ್ಯಯ ಬರದಂತೆ ಹೊಸ ಹೊಸ ಪ್ರೇಕ್ಷಕರಿಗೆ, ಮೂಲದ ಜೊತೆಗೆ ಸಮಪಾತಳಿಯಲ್ಲಿ ಮತ್ತೊಂದು ನಾಟಕವನ್ನು ತೋರಿಸುತ್ತ, ನೇರವಾಗಿ ಸಮಕಾಲೀನ ಸಮಾಜವನ್ನು ಹಾಗೂ ಪ್ರೇಕ್ಷಕ ವರ್ಗವನ್ನು ಪ್ರಶ್ನಿಸುವ, ವಿಮರ್ಶಿಸುವ ತಂತ್ರವನ್ನು ಇಲ್ಲಿ ಕಾಣಬಹುದು. ಪಾರಿಜಾತದ ಕೊರವಂಜಿ ಪಾತ್ರದ ವಿಶಿಷ್ಟ ಸೇರ್ಪಡೆಯೂ ಇಲ್ಲಿದೆ. ಅವಳ ಹಾಡು-ಮಾತಿನ ಮೂಲಕ ನಮ್ಮ ಸಂಸ್ಕೃತಿಯ ಹಲವಾರು ವಿವರಗಳನ್ನೂ ಈ ನಾಟಕದಲ್ಲಿ ಕಾಣಬಹುದು.